ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು?
ಚಾಚುತಿಹುದಾತ್ಮ ನಾಲಗೆಯ ದೆಸೆದೆಸೆಗೆ.
ಬಾಚಿಕೊಳಲಮೃತಕಣಗಳನೆಲ್ಲ ತನ್ನೆಡೆಗೆ
ಸಾಜ ಸೊಗವಾತ್ಮಂಗೆ – ಮಂಕುತಿಮ್ಮ ॥ 268 ॥
ನಾಚಿಕೆಯದೇಕೆ = ನಾಚಿಕೆಯು + ಅದೇಕೆ//ಚಾಚುತಿಹುದಾತ್ಮ = ಚಾಚಿಹುದು+ ಆತ್ಮ// ಬಾಚಿಕೊಳಲಮೃತಕಣಗಳನೆಲ್ಲ = ಬಾಚಿಕೊಳ್ಳಲು+ಅಮೃತ+ ಕಣಗಳ +ಎಲ್ಲ // ಸೊಗವಾತ್ಮಂಗೆ= ಸೊಗವು+ ಆತ್ಮಂಗೆ.